ನೊಳಂಬ ಸ್ವಯಂ ಸೇವಕ ಸಂಘ (ರಿ ) ಕ್ಕೆ ಸ್ವಾಗತ

ಸುರಕ್ಷಿತವಾದ, ದೃಢವಾದ ಮತ್ತು ಮೌಲ್ಯಯುತವಾಗಿರುವ ಸಮಾಜವನ್ನುನಿರ್ಮಿಸೊಣ...

ನಮ್ಮ ಪರಿಚಯ

ಈ ವೇದಿಕೆಯ ಪ್ರಾರಂಭಮಾಡುವ ಮೂಲ ಉದ್ದೇಶ,

ಅಧಿಕ ಆರ್ಥಿಕ ಖರ್ಚು- ವೆಚ್ಚವಿಲ್ಲದೆ, ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ನಮ್ಮ ನೊಳಂಬ ಸಮಾಜ ಬಾಂಧವರಲ್ಲಿ ನಿತ್ಯ ಸಂಪರ್ಕ ಹೊಂದಲು ಸಾದ್ಯವೇ?

ಎಲ್ಲಾ ಪ್ರದೇಶದ ಸಮಾಜ ಬಂಧುಗಳನ್ನು ಹಾಗು ವಿವಿಧ ನೊಳಂಬ ಲಿಂಗಾಯತ ಸಮಾಜದ ಸಂಘ- ಸಂಸ್ಥೆಗಳನ್ನು ಒಂದೇ ಸೂರಿನಡಿತರಲು ಸಾದ್ಯವೇ?

ನೊಳಂಬ ಸಮಾಜದ ಒಗ್ಗಟ್ಟಿಗೆ ಪಕ್ಷಾತೀತವಾದ ಬಲಿಷ್ಟ ಸಂಘಟನೆ ಹುಟ್ಟುಹಾಕಲು ಸಾದ್ಯವೇ? ಎನ್ನುವ ಇನ್ನೂ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಆಲೋಚನೆಗಳ ಫಲಶ್ರುತಿ.

ಈ ವೇದಿಕೆಯ ಮುಂದಿನ ಉದ್ದೇಶಗಳು::

1. ನೊಳಂಬ ಸ್ವಯಂ ಸೇವಕ ಸಂಘದ ಜಿಲ್ಲಾ, ತಾಲ್ಲೂಕು ಮತ್ತು ಹಳ್ಳಿ ಮಟ್ಟದ ಘಟಕಗಳ ರಚನೆ
2. ಸಂಘದ ನಿರಂತರ ಮಾರ್ಗದರ್ಶನಕ್ಕೆ 10 ಕ್ಕೂ ಹೆಚ್ಹಿನ ಉಪಸಮಿತಿಗಳ ರಚನೆ
3. ಈ ವೇದಿಕೆಯ ಎಲ್ಲಾ ಸ್ವಯಂ ಸೇವಕರು ನಮ್ಮ ಸಮಾಜದ ರಾಜ್ಯ ಸಂಘ ಮತ್ತು ಇತರೆ ಸಂಘಟನೆಗಳು ಹಮ್ಮಿ ಕೊಳ್ಳುವ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುವುದು
4. ಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ನೆರವಾಗುವುದು
5. ನಮ್ಮ ಸಮಾಜವಿರುವ ಪ್ರದೇಶಗಳಲ್ಲಿ ನಮ್ಮ ಬಾಂಧವರನ್ನೇ ಬಳಸಿಕೊಂಡು ನಿರಂತರವಾಗಿ ಉದ್ಯೋಗ, ಆರೋಗ್ಯ, ಕಾನೂನು ಮತ್ತು ವ್ಯಾಜ್ಯ ಪರಿಹಾರ ಮೇಳಗಳನ್ನ ಹಮ್ಮಿ ಕೊಳ್ಳುವುದು
6. ಸಮಾಜದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸಬಲಿಕರಣಕ್ಕೆ ಒಟ್ಟಾಗಿ ಶ್ರಮಿಸುವುದು.

ನಮ್ಮ ಉದ್ದೇಶ

01.

— ಸ್ವಯಂ ಸೇವಕ ಸಂಘದ ರಚನೆ

ನೊಳಂಬ ಸ್ವಯಂ ಸೇವಕ ಸಂಘದ ಜಿಲ್ಲಾ, ತಾಲ್ಲೂಕು ಮತ್ತು ಹಳ್ಳಿ ಮಟ್ಟದ ಘಟಕಗಳ ರಚನೆ

02.

— ಸಮಾಜದ ಪರಿಣಿತ ಬಾಂಧವರ ನಡುವೆ ನಿರಂತರ ಸಂಪರ್ಕ

ಸಮಾಜದ ಹಿರಿಯರ,ಬುದ್ದಿ ಜೀವಿಗಳ,ಉದ್ದಿಮೆದಾರರ,ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಣಿತ ಸಮಾಜ ಬಾಂಧವರ ನಡುವೆ ನಿರಂತರ ಸಂಪರ್ಕ ಸಾದಿಸಲು ನೆರವಾಗಿದೆ

03.

— ವಿವಿಧ ಕ್ಷೇತ್ರಗಳ ಅವಕಾಶ- ಸಂಭಂದಿತ ಮಾಹಿತಿ

ಸಮಾಜ ಬಾಂಧವರಿಗೆ ನಿರಂತರವಾಗಿ ಉದ್ಯೋಗದ, ವಿಧ್ಯಾಭ್ಯಾಸದ, ಹಾಸ್ಟೆಲ್ ಸೌಲಭ್ಯದ, ಉದ್ದಿಮೆ ಅವಕಾಶಗಳ, ವ್ಯವಸಾಯ ಸಂಭಂದಿತ ಮಾಹಿತಿಗಳನ್ನ ಹಾಕಲಾಗುತ್ತಿದೆ.

04.

—ಸಮಾಜದ ಸಂಘಟನೆಯ ಕಳಕಳಿ

ಯಾವುದೇ ಪೂರ್ವಗ್ರಹ ಪೀಡಿತರಾಗದೆ ಸಮಾಜದ ಸಂಘಟನೆಯ ಕಳಕಳಿ ಇರುವ ಸಮಾಜದ, ಯುವಕ- ಯುವತಿ ಯರನ್ನ ಈ ವೇದಿಕೆಗೆ ಅವರ ಸದಸ್ಯತ್ವ ನೊಂದಣಿ ಅಂಕಿ-ಅಂಶಗಳ ಆದಾರದ ಮೇಲೆ ಶೋಧನೆ ಮಾಡಿ ಹಾಗು ಅವರ ಪಾಲುದಾರಿಕೆ ಮತ್ತು ಆಸಕ್ತಿ ಗಮನಿಸಿ ವಿವಿಧ ಸ್ತರಗಳ ನಾಯಕತ್ವದ ಜವಾಬ್ದಾರಿ ನೀಡಲಾಗುತ್ತಿದೆ

05.

— ನೊಳಂಬ ಸಮಾಜದ ಇತಿಹಾಸ ಪರಿಚಯ

ಈ ವೇದಿಕೆಯು ನೊಳಂಬ ಸಮಾಜದ ಇತಿಹಾಸ, ನೊಳಂಬ ಮಠಗಳು, ಗುರುಗಳು ಮತ್ತು ಶ್ರೀ ಸಿದ್ದರಾಮೇಶ್ವರರ ಗದ್ದುಗೆಗಳ ಬಗ್ಗೆ ಮಾಹಿತಿಯನ್ನ ವಿನಿಮಯ ಮಾಡಿ ಕೊಳ್ಳುವ ಮುಖೇನ ಸಮಾಜದ ಜಾಗ್ರತೆ ಉಂಟುಮಾಡಲು ನೆರವಾಗಿದೆ

06.

— ಸಮಾಜ ಬಾಂಧವರನ್ನ ಮತ್ತು ಧರ್ಮ ಗುರುಗಳ ಸಂಪರ್ಕ

ಸಮಾಜ ಬಾಂಧವರನ್ನ ಮತ್ತು ಧರ್ಮ ಗುರುಗಳ ಸಂಪರ್ಕ ಸಾದಿಸಲಾಗಿದೆ

ಸಾಧನೆ

ಸಾಧನೆ

ಈ ವೇದಿಕೆಯು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಸಮಾಜ ಬಾಂಧವರನ್ನ ಒಂದೇ ಸೂರಿನಡಿ ತರಲು ಸಹಕಾರಿಯಾಗಿದೆ

ಸಾಧನೆ

 ರಾಜ್ಯದ ಎಲ್ಲಾ ನೊಳಂಬ ಸಮಾಜದ ಮಠಗಳು ಮತ್ತು ಧರ್ಮ ಗುರುಗಳ ಸಂಪರ್ಕ ಸಾದಿಸಲಾಗಿದೆ

ಅಂಗಸಂಸ್ಥೆಗಳು